ಆಜಿಮ್‍ಘರ್
ಉತ್ತರ ಪ್ರದೇಶದ ಒಂದು ಜಿಲ್ಲೆ ಮತ್ತು ಮುಖ್ಯ ಪಟ್ಟಣ (ಉ.ಅ. 260-200, ಪೂ.ರೇ. 820-800). ಕಾಶಿಯಿಂದ (ವಾರಣಾಸಿ) 85 ಕಿ.ಮೀ. ದೂರದಲ್ಲಿದೆ. ಟಾನ್ಸ್ ಉಪನದಿಯ ದಡದಲ್ಲಿರುವುದರಿಂದ ಆಗಾಗ್ಗೆ ಪ್ರವಾಹಕ್ಕೆ ತುತ್ತಾಗುತ್ತದೆ. ಜನಸಾಂದ್ರತೆ ಹೆಚ್ಚು. ಬಹುಜನ ವ್ಯವಸಾಯದಿಂದ ಜೀವಿಸುತ್ತಾರೆ. 1665ರಲ್ಲಿ ಮೊಗಲರ ಸಾಮಂತ ಆಜಂಖಾನ್ ಈ ನಗರ ಸ್ಥಾಪಿಸಿದ. ಅದಕ್ಕೂ ಪೂರ್ವದಲ್ಲಿ ಈ ಪ್ರದೇಶ ರಜಪೂತರ ವಶದಲ್ಲಿತ್ತು. ಈಗ ಇಲ್ಲಿ ಒಂದು ಪುರಾತನ ಕೋಟೆಯೂ ಒಂದು ಕಲಾಭವನವೂ ಎರಡು ಕಾಲೇಜುಗಳೂ ಇವೆ. 								
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ